ಭಾವ ಬಂಧನ
ಬಂಧುಗಳೆ ಇವತ್ತಿನ ದಿನಮಾನಗಳಲ್ಲಿ ನಮ್ಮತನವನ್ನ
ನಾವು ಮರೆತಿದಿವಿ ಎಂದಾದರೆ ಮೊದಲು ಮಾಡುವ ಕಾಯಕ ವೃತ್ತಿಯನ್ನ ಮರೆತು ಆಸ್ತಿ ಹಣ ಅಧಿಕಾರ ಸರಕಾರಿ ನೌಕರಿ ದೊಡ್ಡ ಪ್ರಸಿದ್ದ ಉದ್ಯಮಗಳತ್ತ ಮುಖ ಮಾಡಿದ್ದೆವೆ
ನಾವು ಏನು ನಮ್ಮ ಸಮಾಜ ಎಂತಹದ್ದು ಯಾವ ಮೂಲದಿಂದ ನಾವು ಬೆಳೆದಿದ್ದೆವೆ ಎಂಬುದನ್ನ ಮರೆತು
ಆವಸ್ಥಾನಗಳನ್ನ ಬಿಟ್ಟು ಸ್ಥಾನ ಬದಲಾವಣೆಗೆ ಬಂದು ನಿಂತಿದ್ದೆವೆ ಬದುಕು ಇರುವಾಗ ಕಡೆಗಣಿಸಿ ಬದುಕು ಕಠಿಣ ಹಾದಿ ತಲುಪಿದಾಗ ಪ್ರಯತ್ನ ಮಾಡಲು ಹೊರಟರೆ
ನಾವು ಕಲಿಸುವಂತಹ ಸಂಸ್ಕೃತಿ ಮುಂದಿನ ಜನಾಂಗಕ್ಕೆ ಯುವಪಿಳಿಗೆಗೆ ಹೇಗೆ ಕಲಿಸಲು ಸಾಧ್ಯ...
ಹಣವನ್ನ ಬೆನ್ನಟ್ಟಿ ಆಸ್ತಿ ಅಧಿಕಾರ ಸಂಪಾದನೆ ಆಸೆಗೆ ಮುಗಿಬಿದ್ದು ಮುಂದೆ ಆಗುವ ಅನಾಹುತಗಳಿಗೆ
ಅಡಿಪಾಯಗಳಾಗಿದ್ದೆವೆ ನಮ್ಮ ಸಂಸ್ಕೃತಿ ಕಲೆ ನಮ್ಮ ಸಮಾಜ ನಮ್ಮ ಮನೆತನದ ವೃತ್ತಿ ಮಾರ್ಗವನ್ನೆ ಸಂಪೂರ್ಣವಾಗಿ ಮರೆತು ಹಣ ಅಂತಸ್ತಿನ ಅಡಿಯಾಳಾಗಿದ್ದವೆ...
ತಪ್ಪಿದ್ದಲ್ಲಿ ಕ್ಷೇಮೆಯಿರಲಿ ಚಪ್ಪಲಿ ಹೊಲಿಯುವ ಚಮ್ಮಾರ ವೃತ್ತಿ ಮರೆತರೆ ತಂತ್ರಜ್ಞಾನ ಒಂದು ಕಸುಬು ಆಗಿಸಿಕೊಂಡಿದೆ
ಬಟ್ಟೆ ನೇಯುವ ನೇಕಾರ ಬಟ್ಟೆ ನೇಯುವುದು ಕಷ್ಟದ ಕೆಲಸವೆಂದು ಮರೆತಾಗ ರೆಡಿಮೆಡ್ ತಂತ್ರಜ್ಞಾನ ಬಂದಿದೆ
ಬಟ್ಟೆ ಹೊಲಿಯುವ ಟೈಲರ್ ತನ್ನ ವೃತ್ತಿ ಮರೆತ ಮೇಲೆ ತಂತ್ರಜ್ಞಾನ ಹೊಸ ಆವಿಷ್ಕಾರ ತಂದಿದೆ...
ಗಾಣ ತಿರುಗಿಸೊ ಗಾಣಿಗ ತನ್ನ ವೃತ್ತಿ ನಿಂತ ಮೇಲೆ ಬೇರೆ ಬೇರೆ ತರಹದ ಆಯಿಲ್ ಮಿಲ್ ಗಳು ಸ್ಥಾಪನೆಯಾಗಿವೆ
ಹೀಗೆ ಪ್ರತಿಯೊಬ್ಬರು ನಮ್ಮ ವೃತ್ತಿ ನಮ್ಮ ಜವಾಬ್ದಾರಿಗಳನ್ನ ಮರೆತು ನಡೆದಾಗ ಪ್ರಗತಿಪರ ಯೋಜನೆಯಲ್ಲಿ ನಮ್ಮ ನಿಮ್ಮ ಯೋಚನೆ ಮನೆತನ ಸಮಾಜದ ವೃತ್ತಿಗಳು ಬೇರೆ ಉದ್ಯಮದಾರರಿಗೆ ಉಚಿತವಾಗಿ ಮಾರಾಟ ಮಾಡಿ
ಇಂದು ಆ ಉದ್ಯಮದಾರರ ಅಡಿಯಾಳಾಗಿದ್ದೆವೆ...
ಇಂದು ಎಷ್ಟೆ ತಂತ್ರಜ್ಞಾನ ಆವಿಷ್ಕಾರಗಳು ಮುಂದುವರೆದರು ಕೈ ಕೆಸರಾಗದೆ ಹಸಿದ ಹೊಟ್ಟೆಗೆ ಅನ್ನ
ಸಿಗಲಾರದು....
ಇಂದಿನ ದಿನಮಾನಗಳಲ್ಲಿ ಅನಕ್ಷರತೆ ಅಳಿದಿದೆ ಅಕ್ಷರತೆ ಬೆಳೆಯುತಿದೆ ಅಕ್ಷರ ಜ್ಞಾನ ಮೌಢ್ಯತನ ತೊಲಗಿ ಅಂಧಕಾರ ಅಳಿದು ಪ್ರಜ್ಞಾವಂತ ಜೀವನ ನಡೆಸಲು ಬೇಕೆ ಹೊರೆತು ನೌಕರಿ ಹಾದಿಯನ್ನೆ ಹಿಡಿಯಬೇಕಂತೆನಿಲ್ಲ
ಸ್ಕೂಲ್ ಮೆಟ್ಟಿಲು ಹತ್ತದ ಒಬ್ಬ ಅಮೇರಿಕಾದ ಕರ್ನಲ್ ಹಾರ್ಲ್ಯಾಂಡ್ ಸ್ಯಾಂಡರ್ಸ್ ಇಂದಿನ KFC chiken resturent ರೂವಾರಿ
ಮೊದಲು ಒಬ್ಬ ಶ್ರೀಮಂತನ ಮನೆಯಲ್ಲಿ ಅಡುಗೆದಾರನಾಗಿ ಕೆಲಸಕ್ಕೆ ಸೇರಿದ ಒಬ್ಬ ಅಡುಗೆದಾರನನ್ನ ಮದುವೆಯಾದ
ಕರ್ನಲ್ ಹಾರ್ಲ್ಯಾಂಡ್ ಸ್ಯಾಂಡರ್ಸ್ ನ ಹೆಂಡತಿ ಮಕ್ಕಳು ಸಮೇತ ಬಿಟ್ಟು ಹೋದ್ರು ಮನೆಯಿಂದ ಆಚೆ ಹಾಕಿದ್ರು
ತನ್ನ ವೃತ್ತಿ ಜೀವನದಿಂದ ಬಿದಿಗೆ ಬಿದ್ದರು ಎದೆಗುಂದದೆ ತನ್ನ
ವೃತ್ತಿ ಬಿಡಲಿಲ್ಲ ವಯಸ್ಸಾದ ಮೇಲೆ ನಿವೃತ್ತಿನು ಆಯಿತು ಯಾರು ಕೆಲಸಕ್ಕೆ ಕೂಡ ಸೇರಸಿಕೊಳ್ಳಲಿಲ್ಲ ಆ ವ್ಯಕ್ತಿ ಆವತ್ತು ತನ್ನ ಆಸಕ್ತಿದಾಯಕ skill ನ್ನ ಅರಿಯದೆ ಮೂಕವಿಸ್ಮಯನಾದ ತನ್ನಲ್ಲಿ ಅಡುಗೆ ಮಾಡುವ ಕಲೆಯಿದ್ದರು ಏನು ತೋಚಲಿಲ್ಲ ಯಾವ ಬ್ಯಾಂಕ್ ಫೈನಾನ್ಸ್ ಸಾಲ ಕೊಡಲು ಮುಂದೆ ಬರಲಿಲ್ಲ ತನ್ನ ಬಳಿಯಿದ್ದ ನಿವೃತ್ತಿಯಿಂದ ಸಿಕ್ಕ ಅಲ್ಪ ಹಣದಿಂದ ಪುಟ್ ಪಾತ್ ಮೇಲೆ ಚಿಕ್ಕದಾಗಿ ಒಂದು ಚಿಕೇನ್ ಕಬಾಬ್ ಸ್ಟಾಲ್ ಆರಂಭಿಸಿದ
ವಯಸ್ಸಿನ ಅಂತರ ಮುಗಿವಷ್ಟರಲ್ಲಿ ಸಾಧಿಸುವ ಹಂಬಲ ಛಲವಿದ್ದರು ಬದುಕು ಆಯಾಸವಾಗಿ ಮರಣ ಹೊಂದುವ ಸಮಯಕ್ಕೆ ನಾನು ಏನೆಲ್ಲಾ ಮಾಡಬಹುದಿತ್ತು ಏನು ಮಾಡಲಾಗಲಿಲ್ಲ ನನ್ನ ಕೈ ರುಚಿ ನನಗೆ ತಿಳಿಯಲಿಲ್ಲ ತನ್ನ ಚಿಕ್ಕ ಚಿಕೇನ್ ಸ್ಟಾಲ್ ದೊಡ್ಡ ಮಟ್ಟದಲ್ಲಿ ಬೆಳೆಯುವುದನ್ನ ನೋಡಿ ನೊಂದರು ಬೆಂದರು ವಯಸ್ಸಿನ ಮಿತಿ ಮರಣದ ಸನಿಹ ಆದರೆ ಮರಣದ ನಂತರ ಅವರ ಹೆಸರು ಅಜರಾಮರ ..ಅದೇ KFC ರೆಸ್ಟೋರೆಂಟ್ ಯಾಕೆ
ಈ ಒಂದು ಚಿಕ್ಕ ಕಥೆ ಬಿಂಬಿಸಲು ಕಾರಣ ಯಾವ ಕಾರಣಕ್ಕೂ motivate ಆಗಬೇಡಿ ಅವರ ಆದರ್ಶಗಳ ಹಾದಿಯಲ್ಲಿ ನಮ್ಮಲ್ಲಿನ ನಮ್ಮ ಸಂಸ್ಕೃತಿಯಡಿಯಲ್ಲಿ
ನಮ್ಮ ಮಕ್ಕಳನ್ನ ಸರಿಯಾದ ದಾರಿಗೆ ಬೆಳೆಸುವಂತಹ
ಸಂಸ್ಕೃತಿ ಕಲೆಯನ್ನ ರೂಢಿಸಿಕೊಳ್ಳಬೇಕಾಗಿದೆ
ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಆಸಕ್ತಿದಾಯಕ
ಜೀವನಕ್ಕೆ ಅಡಿಪಾಯ ನೀಡಿ ಸದೃಢರನ್ನಾಗಿಸಿ
ಕೇವಲ IAS IPS ಸರಕಾರಿ ನೌಕರಿ ಮಾಡೆಲ್ ಅಂತ ಅವರಿಗೆ ನೀವೆ ಗುರಿಗಳನ್ನ ನೀಡಬೇಡಿ ಅವರ ಬದುಕನ್ನ ಅವರು ಕಲಿಯಬೇಕು ತಿಳಿದುಕೊಳ್ಳಬೇಕು ಬಿದ್ದನೆಂದು ತಪ್ಪು ಮಾಡಿದನೆಂದು ತಿದ್ದಿ ಹೇಳಿ ತಪ್ಪಿಗೆ ಒಪ್ಪಿಗೆ ನೀಡಬೇಡಿ
ಎಡವಿ ಬಿಳಬೇಕು ಬಿದ್ದಾಗ ಮೇಲೆಳುವುಂತಹ ಆತ್ಮಸ್ಥೇರ್ಯ ಛಲ ದೃಢ ನಿರ್ಧಾರಗಳನ್ನ ಬೆಳೆಸಬೇಕು
ಶಿಕ್ಷಣದಲಿ ಮುಂದುವರೆದು ಏನು ಮಾಡಬೇಕು ಅಂತಿದಾರೊ ಅದಕ್ಕೆ ಬೆಂಬಲವಾಗಿರಿ ..
ಕೇಲವೊಂದು ಮನೆ ಮತ್ತು ಮನ ಪರಿಸ್ಥಿತಿಗಳು ಚಿಂತಾಜನಕವಾದಾಗ ಅವರಿಗೆ ಬದುಕಿನ ಕ್ರಿಯಾಶೀಲತೆ ಕೌಶಲ್ಯ ಬೆಳೆಸಿ...
ಶಿಕ್ಷಣ ಕೈ ಬಿಟ್ಟರು ಶಿಕ್ಷಣ ಕೈ ಕೊಟ್ಟರು ಕ್ರಿಯಾಶೀಲತೆ ಕೌಶಲ್ಯ ಅವರ ಬದುಕನ್ನ ಮುನ್ನಡೆಸುತ್ತದೆ...
ಇಲ್ಲವಾದಲ್ಲಿ ಮುಂದಿನ ಯೌವ್ವನದ ಬದುಕಲ್ಲಿ ಪೋಷಕರು
ಎಷ್ಟೇ ಗೋಳಾಡಿ ಕಣ್ಣಿರಿಟ್ಟರು ಮಗನ ಯೌವ್ವನ ಚಿಂತೆ ಚಿತೆಯಲ್ಲಿ ಸುಡಬೇಕಾಗುತ್ತದೆ ...
ಧೈರ್ಯ ಪ್ರಯತ್ನ ಗುರಿ ಕನಸು ಈಡೇರಬೇಕಾದರೆ
ಪ್ರತಿ ಮಗನ ಹಿಂದೆ ಪೋಷಕರ ಜವಾಬ್ದಾರಿ ಧೈರ್ಯ ಪ್ರೋತ್ಸಾಹಗಳಿಂದ ಮಾತ್ರ ಈ ಸಮಾಜದಲ್ಲಿ ಗೌರವ ಮನ್ನಣೆ ಸಿಗಲು ಸಾಧ್ಯ.
ಇಂದಿನ ಪರಿಸ್ಥಿತಿಯಲ್ಲಿ ಮದುವೆ ಆಗಲು ವರ ಸಿಕ್ಕರು ವಧು ಸಿಗುವುದ ಕಷ್ಟ ಕಾರಣ ಮಗಳನ್ನ ಓದಿಸಿ ವಿದ್ಯಾವಂತಳಾನ್ನಾಗಿಸಿ ಉತ್ತಮವಾದ ಜೀವನ ರೂಪಿಸಿ
ಹಣ ಆಸ್ತಿ ಅಧಿಕಾರ ಸಂಸ್ಕಾರ ಮನೆತನಕ್ಕೆ ಮದುವೆ ಮಾಡಿ ಕಳಸಿದರೆ ....
ಮಗನಿಗೆ ಸ್ಕೂಲಲಿ ಹೇಳಿದ ಪಾಠ ಅರ್ಥ ಆಯಿತು ಬಿಟ್ಟಿತು ಗೊತ್ತಿಲ್ಲ ಕಲಿಯುವ ವಯಸ್ಸಿನಲ್ಲಿ ಮನೆಯ ಕೆಟ್ಟ ಪರಿಸ್ಥಿತಿಯ ಪಾಠವನ್ನ ನೀಡಿ ಬದುಕಿನ ಮುನ್ನಡೆ ಬರೆಯಬೇಕಾದ ಮಗನಿಗೆ ಶಿಕ್ಷಣ ಕಷ್ಟವಾದಾಗ ಅನಿವಾರ್ಯ ಮನೆಯ ಸ್ಥಿತಿಗತಿಗಳನ್ನರಿತು ಮನೆ ಮಗನಾದ..
ಮುಂದೆ ಯೌವ್ವನದಲ್ಲಿ ಮಗನಿಗೆ ವಧು ಹುಡುಕಾಟದಲ್ಲಿ ಮಗನ ಜವಾಬ್ದಾರಿ ಏನೆಂಬುದೆ ಮರೆತು ಕೊರಗಿದರೆ ಭಗವಂತನು ಕೂಡ ಕೈ ಹಿಡಿಯಲಾರ ..
ಓದುವ ಉತ್ಸಾಹ ಕೈ ಬಿಟ್ಟ ಮೇಲೆ ಕ್ರಿಯಾಶೀಲತೆ ಕೌಶಲ್ಯ ರೂಪಿಸಿದ್ದರೆ ಯೌವ್ವನ ವಯಸ್ಸಿಗೆ ಅವನೊಬ್ಬ ಮಗಳಿಗಿಂತ
ಉತ್ತಮ ಆರ್ಥಿಕ ಕೀರ್ತಿವಂತ ಯಾರು ತಾನೆ ಮುಂದೆ ಬರುವುದಿಲ್ಲ ವರನನ್ನ ಹುಡುಕಿಕೊಂಡು...
ನಮ್ಮನ್ನ ನಾವು ಬೆಳೆಸಿಕೊಂಡಾಗ ಮಾತ್ರ ಮುಂದಿನ ಜನಾಂಗ ಬೆಳೆಸಲು ಸಾಧ್ಯ...
ಚಿಕ್ಕ ಅನುಭವ ಚೊಕ್ಕದಾದ ಶೈಲಿ
ವಿನಂತಿ
ಕಿರಿಯನ ತಪ್ಪಿನ ನಡೆಗೆ ಕ್ಷೇಮೆಯಿರಲಿ
@ವಿಶು