Posts

ಭಾವ ಬಂಧನ

Image
ಬಂಧುಗಳೆ ಇವತ್ತಿನ ದಿನಮಾನಗಳಲ್ಲಿ ನಮ್ಮತನವನ್ನ ನಾವು ಮರೆತಿದಿವಿ ಎಂದಾದರೆ ಮೊದಲು ಮಾಡುವ ಕಾಯಕ ವೃತ್ತಿಯನ್ನ ಮರೆತು ಆಸ್ತಿ ಹಣ ಅಧಿಕಾರ ಸರಕಾರಿ ನೌಕರಿ ದೊಡ್ಡ ಪ್ರಸಿದ್ದ ಉದ್ಯಮಗಳತ್ತ ಮುಖ ಮಾಡಿದ್ದೆವೆ ನಾವು ಏನು ನಮ್ಮ ಸಮಾಜ ಎಂತಹದ್ದು ಯಾವ ಮೂಲದಿಂದ ನಾವು ಬೆಳೆದಿದ್ದೆವೆ ಎಂಬುದನ್ನ ಮರೆತು ಆವಸ್ಥಾನಗಳನ್ನ ಬಿಟ್ಟು ಸ್ಥಾನ ಬದಲಾವಣೆಗೆ ಬಂದು ನಿಂತಿದ್ದೆವೆ ಬದುಕು ಇರುವಾಗ ಕಡೆಗಣಿಸಿ ಬದುಕು ಕಠಿಣ ಹಾದಿ ತಲುಪಿದಾಗ ಪ್ರಯತ್ನ ಮಾಡಲು ಹೊರಟರೆ ನಾವು ಕಲಿಸುವಂತಹ ಸಂಸ್ಕೃತಿ  ಮುಂದಿನ ಜನಾಂಗಕ್ಕೆ ಯುವಪಿಳಿಗೆಗೆ ಹೇಗೆ ಕಲಿಸಲು ಸಾಧ್ಯ... ಹಣವನ್ನ ಬೆನ್ನಟ್ಟಿ ಆಸ್ತಿ ಅಧಿಕಾರ ಸಂಪಾದನೆ ಆಸೆಗೆ ಮುಗಿಬಿದ್ದು ಮುಂದೆ ಆಗುವ ಅನಾಹುತಗಳಿಗೆ ಅಡಿಪಾಯಗಳಾಗಿದ್ದೆವೆ ನಮ್ಮ ಸಂಸ್ಕೃತಿ ಕಲೆ ನಮ್ಮ ಸಮಾಜ ನಮ್ಮ ಮನೆತನದ ವೃತ್ತಿ ಮಾರ್ಗವನ್ನೆ ಸಂಪೂರ್ಣವಾಗಿ ಮರೆತು ಹಣ ಅಂತಸ್ತಿನ ಅಡಿಯಾಳಾಗಿದ್ದವೆ... ತಪ್ಪಿದ್ದಲ್ಲಿ ಕ್ಷೇಮೆಯಿರಲಿ ಚಪ್ಪಲಿ ಹೊಲಿಯುವ ಚಮ್ಮಾರ ವೃತ್ತಿ ಮರೆತರೆ ತಂತ್ರಜ್ಞಾನ ಒಂದು ಕಸುಬು ಆಗಿಸಿಕೊಂಡಿದೆ ಬಟ್ಟೆ ನೇಯುವ ನೇಕಾರ ಬಟ್ಟೆ ನೇಯುವುದು ಕಷ್ಟದ ಕೆಲಸವೆಂದು ಮರೆತಾಗ ರೆಡಿಮೆಡ್ ತಂತ್ರಜ್ಞಾನ ಬಂದಿದೆ ಬಟ್ಟೆ ಹೊಲಿಯುವ ಟೈಲರ್ ತನ್ನ ವೃತ್ತಿ ಮರೆತ ಮೇಲೆ ತಂತ್ರಜ್ಞಾನ  ಹೊಸ ಆವಿಷ್ಕಾರ ತಂದಿದೆ... ಗಾಣ ತಿರುಗಿಸೊ ಗಾಣಿಗ ತನ್ನ ವೃತ್ತಿ ನಿಂತ ಮೇಲೆ ಬೇರೆ ಬೇರೆ ತರಹದ ಆಯಿಲ್ ಮಿಲ್ ಗಳು ಸ್ಥಾಪನೆಯಾಗಿವೆ ಹ...